ಮಾಲಾಶ್ರೀ-ಸಾಯಿಪ್ರಕಾಶ್ ‘ಗಂಗಾ’
Posted date: 04 Wed, Jun 2014 – 10:18:28 AM

೧೯೯೦ ರ ದಶಕದಲ್ಲಿ ಸೂಪರ್ ಹಿಟ್ ಜೋಡಿ ಎಂದೇ ಹೇಳಲಾದ ನಾಯಕಿ ಮಾಲಾಶ್ರೀ ಹಾಗೂ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ೧೯ ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ.

ಸಾಯಿ ಪ್ರಕಾಶ್ ಹಾಗೂ ಮಾಲಾಶ್ರೀ ಅವರ ‘ಗಂಗಾ’ ಹೊಸ ಚಿತ್ರವು ಸೌಮ್ಯ ಹಾಗೂ ಕ್ರೌರ್ಯಗಳ ಸಂಗಮ. ಮಾಲಾಶ್ರೀ ಅವರ ಹಿಂದಿನ ಸೀರೆ ಇಮೇಜ್ ಹಾಗೂ ಇಂದಿನ ಸಾಹಸ ಇಮೇಜ್ ಸಮ್ಮಿಲನ ಇದ್ದು ಈ ಚಿತ್ರವು ರಾಮು ಎಂಟೆರ್‌ಪ್ರೈಸಸ್ ಅಡಿಯಲ್ಲಿ ತಯಾರಾಗುಗುತ್ತಿದೆ. ಇದೆ ತಿಂಗಳ ಜೂನ್ ೬ ರಂದು ಚಿತ್ರೀಕರಣ ಮುಹೂರ್ತ ಸಹ ನಿಗದಿ ಆಗಿದೆ. ರಾಮು ಎಂಟೆರ್‌ಪ್ರೈಸಸ್ ಲಾಂಛನದಲ್ಲಿ ಇದು ೩೬ನೇ ಚಿತ್ರವಾಗಿದೆ.

ನಿರ್ದೇಶಕ ಓಂ ಸಾಯಿ ಪ್ರಕಾಶ್ ಹಾಗೂ ಮಾಲಾಶ್ರೀ ಅಭಿನಯದಲ್ಲಿ ಜನಪ್ರಿಯ ಚಿತ್ರಗಳಾದ ಪೋಲಿಸನ ಹೆಂಡತಿ, ಸೊಲ್ಲಿಲ್ಲದ ಸರದಾರ, ಕಿತ್ತೂರಿನ ಹುಲಿ, ಗೃಹಪ್ರವೇಶ, ರೆಡಿಮೆಡ್ ಗಂಡ, ತವರುಮನೆ ಉಡುಗೊರೆ, ಮಾಲಾಶ್ರೀ ಮಾಮಾಶ್ರೀ, ನಗರದಲ್ಲಿ ನಾಯಕರು, ಗಡಿಬಿಡಿ ಅಳಿಯ ಸಿನಿಮಗಳು ಬಂದಿವೆ.

ಅಂದಹಾಗೆ ಮಾಲಾಶ್ರೀ ಅವರು ಸೀರೆ ಉಟ್ಟು ಈ ‘ಗಂಗಾ’ ಸಿನಿಮಾದಲ್ಲಿ ಕಂಗೊಳಿಸಲಿದ್ದಾರೆ. ಸಾಹಸ ಚಿತ್ರUಳಲ್ಲಿ ಮಾಲಾಶ್ರೀ ಅವರು ಅಭಿನಯಿಸಲು ಪ್ರಾರಂಭಿಸಿದ ಮೇಲೆ ಸೀರೆ ಉಟ್ಟ ಪಾತ್ರಗಳು ವಿರಳ ಆಗಿದ್ದವು.

ಅರ್ಜುನ್ ಜನ್ಯ ಅವರ ಐದು ಹಾಡುಗಳಿಗೆ ರಾಗ ಸಂಯೋಜನೆ ಇರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮಾಡಲಾಗುವುದು. ರಾಜೇಶ್ ಕಟ್ಟ ಚಿತ್ರದ ಛಾಯಾಗ್ರಾಹಕರು. ಅನಿಲ್ ಕುಮಾರ್ ಅವರು ಸಂಭಾಷಣೆ ಬರೆದಿದ್ದಾರೆ.

ಉಳಿದ ತಾರಾಗಣದಲ್ಲಿ ರಂಗಾಯಣ ರಘು, ಶ್ರೀನಿವಾಸಮೂರ್ತಿ. ಪವಿತ್ರ ಲೋಕೇಶ್, ಶರತ್ ಲೋಹಿತಾಶ್ವ, ಹೇಮ ಚೌಧರಿ ಇತರರು ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed